ಅಭಿಪ್ರಾಯ / ಸಲಹೆಗಳು

ಇ-ಸ್ಯಾಪ್

 esap
 
         

               ಇ-ಸ್ಯಾಪ್, ಎಂಬುದು ಮಾಹಿತಿ ತಂತ್ರಜ್ಞಾನದ ಆಯಾಮದಡಿ ನಿರ್ಮಿತವಾಗಿರುವ ಬಹುಪಯೋಗಿ ಪೀಡೆ ನಿರ್ವಹಣಾ ತಂತ್ರಂಶ. ಈ ತಂತ್ರಜ್ಞಾನವು ಕೃಷಿ ವ್ಯವಸ್ಥೆಯಲ್ಲಿ ತೊಡಗಿರುವ ರೈತರು, ಕೃಷಿ ವಿಶ್ವವಿದ್ಯಾಲಯಗಳ ಮತ್ತು ನೀತಿ ನಿರೂಪಕರನ್ನು ಒಂದೇ ವೇದಿಕೆಯಡಿ ತಂದು ಪರಸ್ಪರ ಮಾಹಿತಿಯನ್ನು ಮತ್ತು ಕ್ಷೇತ್ರಮಟ್ಟದಲ್ಲಿ ಪೀಡೆ ನಿರ್ವಹಣೆಗೆ ಸಂಬಂಧಿಸಿದ ನೈಜ ಪರಿಹಾರವನ್ನು ಆಧುನಿಕ ಸಂವಹನ ಸಾಧನಗಳಾದ ಮೊಬೈಲ್, ಕರಯಂತ್ರದ ಮೂಲಕ ಕ್ರೋಡಿಕರಿಸಿ ನೀಡುವುದಾಗಿದೆ.

                ಇ-ಸ್ಯಾಪ್ ತಂತ್ರಜ್ಞಾನವು ಭಾಷೆ ಮತ್ತು ಸಾಕ್ಷರತೆಯ ತೊಡಕುಗಳನ್ನು ಮೀರಿ, ಕ್ಷೇತ್ರಮಟ್ಟದಲ್ಲಿ ಬಹುಮಾಧ್ಯಮಗಳ ಬಳಕೆಯೊಂದಿಗೆ ಪೀಡೆಗಳ ಸಮಗ್ರ ನಿರ್ವಹಣೆಗೆ ಆದ್ಯತೆ ನೀಡಿರುವುದು ಇದರ ವಿಶೇಷ ಗುಣಲಕ್ಷಣವಾಗಿದೆ. ಕ್ಷೇತ್ರದಲ್ಲಿ ಪೀಡೆಗಳನ್ನು ಗುರುತಿಸುವ ಕ್ರಮ ಮತ್ತು ಅದನ್ನು ಪರಿಮಾಣೀಕರಿಸಿ, ಸಮೀಕ್ಷೆಯ ಮೂಲಕ ನೈಜ ಪರಿಹಾರ ನೀಡುವಲ್ಲಿ ಇ-ಸ್ಯಾಪ್ ಒಂದು ಮೊದಲ ಹೆಜ್ಜೆ. ಅಷ್ಟೇಅಲ್ಲದೇ, ಇದು ನಿರಂತರವಾಗಿ ಕೀಟ/ರೋಗ/ಪೋಷಕಾಂಶಗಳ ಕೊರತೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಅಂತರ್ಜಾಲದಲ್ಲಿ ಸಂಗ್ರಹಿಸುವುದರಿಂದ ಮತ್ತು ಅವುಗಳನ್ನು ಅವಶ್ಯಕತೆಗನುಗುಣವಾಗಿ ಪರಿಷ್ಕರಿಸುವುದರಿಂದ  ಕೃಷಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೃಷಿ ಸಂಬಂಧಿತ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಇದು ಲಭ್ಯವಾಗಿ ನೀತಿ ನಿರೂಪಣೆಗೆ ಮತ್ತು ತ್ವರಿತ ರೈತೋಪಯೋಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗಲಿದೆ.

                ಪೀಡೆಗಳ ಸಮಗ್ರ ನಿರ್ವಹಣೆಗೆ ದ್ವಿಮಾರ್ಗದಲ್ಲಿ ಮಾಹಿತಿಯನ್ನು ಹಂಚಿ ನೈಜ ಪರಿಹಾರ ನೀಡುವಲ್ಲಿ ಇ-ಸ್ಯಾಪ್ ತಂತ್ರಜ್ಞಾನವು ಮೊಟ್ಟಮೊದಲನೆಯದಾಗಿದ್ದು, ಈ ಮೂಲಕ ಕೃಷಿ ವಿಸ್ತರಣಾ ಚಟುವಟಿಕೆಗಳಿಗೆ ಮತ್ತಷ್ಟು ಇಂಬು ನೀಡುವಂತಾಗಿದೆ. ಮಾಹಿತಿ ತಂತ್ರಜ್ಞಾನದಡಿ ನಿರೂಪಿಸುವುದಾದರೆ, ದೇಶದ ಕೃಷಿ ವ್ಯವಸ್ಥೆಯನ್ನು ಬಲಪಡಿಸಲು, ಮುಖ್ಯವಾಗಿ ಸಮಗ್ರ ಪೀಡೆ ನಿರ್ವಹಣೆಗೆ ಕರಯಂತ್ರ ಆಧಾರಿತ ಬಹುಮಾಧ್ಯಮೀಯ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ  ಅಂತರ್ಜಾಲ ಅನ್ವಯಿಕೆಗಳ ನಿಯಂತ್ರಣದಡಿ ಬಳಸುವುದಾಗಿದೆ ಮತ್ತು ಕೃಷಿ ವಲಯಕ್ಕೆ ಸಂಬಂಧಿಸಿದ ಎಲ್ಲರನ್ನು ಒಂದೇ ಸೂರಿನಡಿ ತಂದು ಸಮಗ್ರ ಮಾಹಿತಿ ಹಂಚಿಕೆ ಮತ್ತು ತ್ವರಿತ ಪರಿಹಾರ ಕೈಗೊಳ್ಳಲು ಕೈಗೊಂಡ ಕ್ರಾಂತಿಕಾರ ಮೆಟ್ಟಿಲು ಇ-ಸ್ಯಾಪ್ ಎಂದರೆ ತಪ್ಪೇನಲ್ಲ. ಇದಲ್ಲದೆ, ಇಂತಹ ಇನ್ನು ಅನೇಕ ಕೃಷಿ ಸಂಬಂಧಿತ ವ್ಯಕ್ತಿಗಳನ್ನು, ಸಂಘ ಸಂಸ್ಥೆಗಳನ್ನು ಈ ತಂತ್ರಜ್ಞಾನದಡಿ ತರಲು ಅವಕಾಶ ಮುಕ್ತವಾಗಿದೆ.

                ಇ-ಸ್ಯಾಪ್ ಆವಿಷ್ಕಾರವು ವಿಶೇಷವಾಗಿ ರಚನೆಯಾಗಿದ್ದು ಇದರಲ್ಲಿ ಮಾಹಿತಿಯು ಬಹುಮಾಧ್ಯಮದ ಮೂಲಕ ಪ್ರದರ್ಶನಗೊಳ್ಳುತ್ತದೆ. ಇದರಲ್ಲಿ ಯಾವುದೇ ರೀತಿಯ ಭಾಷೆ  ಅಥವಾ ಅಕ್ಷರ ಜ್ಞಾನದ ಅಡತಡೆಗಳಿಲ್ಲದೆ ಕೃಷಿಕ್ಷೇತ್ರದ ಮಾಹಿತಿಯನ್ನು ಮಾತ್ರ ಬಳಸಿಕೊಳ್ಳುತ್ತದೆ. ಇ-ಸ್ಯಾಪ್, ಪೀಡೆಯನ್ನು ಗುರುತಿಸಿ, ಹಾನಿಯ ಪ್ರಮಾಣವನ್ನು ಪರಿಮಾಣೀಕರಿಸುವ ಮೊಟ್ಟ ಮೊದಲ ತಂತ್ರಾಂಶವಾಗಿದೆ. ಅದಲ್ಲದೆ, ಸಮಗ್ರ ಕೀಟ ನಿರ್ವಹಣೆಯ ಮೂಲಾಧಾರವಾದ ಆರ್ಥಿಕ ನಷ್ಟ ರೇಖೆಯ ಪರಿಕಲ್ಪನೆಯ ಮೇಲೆ ಕೀಟವನ್ನು ಗುರುತಿಸುವಂತಹ ಏಕೈಕ ತಂತ್ರಾಂಶ ಇದಾಗಿದೆ. ಕೃಷಿ ಜಗತ್ತಿನಲ್ಲಿ ಕೀಟವನ್ನು ನಿರ್ವಹಿಸಲು ಇ-ತಂತ್ರಾಂಶವು ಒಂದು ಮಹತ್ವ ಪೂರ್ವ ಬೆಳವಣಿಗೆಯೆಂದು ಉಲ್ಲೇಖಿಸಬಹುದು. ಅದಲ್ಲದೆ ಇ-ಸ್ಯಾಪ್‍ನ ಗಮನಾರ್ಹ ಬೆಳವಣಿಗೆ ಎಂದರೆ, ನೈಜ ಸಮಯದಲ್ಲಿ ಕೃಷಿ ಮಾಹಿತಿಯನ್ನು ಸಂಗ್ರಹಿಸಿ ಮತ್ತು ಪರಿಷ್ಕರಿಸುವುದರಿಂದ ದೇಶದಾದ್ಯಂತ ಕೃಷಿ ಸ್ಥಿತಿಯನ್ನು ತಿಳಿಯಲು ಮತ್ತು ಅಂತರ್ಜಾಲದ ಮುಖೇನ ಕೃಷಿಯ ವಿವಿಧ ಪಾಲುದಾರರಿಗೆ, ನೀತಿ ನಿರೂಪಕರಿಗೆ ಮತ್ತು ಸಂಶೋಧಕರಿಗೆ ನೈಜ ಸಮಯದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ.

                ಇ-ಸ್ಯಾಪ್ ತಂತ್ರಜ್ಞಾನವು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮೂಲಕ 2012 ರ ಸಾಲಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಗೊಂಡು, ತದನಂತರ ಜನವರಿ 2013 ರ ಸಾಲಿನಲ್ಲಿ ಕೃಷಿ ವಿಶ್ವವಿದ್ಯಾಲಯ, ರಾಯಚೂರಿನ ವ್ಯಾಪ್ತಿಗೆ ಬರುವ ಎಲ್ಲಾ ತಾಲ್ಲೂಕುಗಳಲ್ಲಿ ವಿಸ್ತಾರಗೊಂಡಿತು. ಇಲ್ಲಿಯ ತನಕ, 40 ಬೆಳೆಗಳಲ್ಲಿ ಸುಮಾರು 1,00,000 ರೈತರು ಈ ತಂತ್ರಂಶದ ಉಪಯೋಗವನ್ನು ಪಡೆದುಕೊಂಡಿರುತ್ತಾರೆ ಮತ್ತು ಕರ್ನಾಟಕ ರಾಜ್ಯದ ಉಳಿದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಕೂಡ ಇ-ಸ್ಯಾಪ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ.

                ಪ್ರಸ್ತುತ ಕನಾರ್ಟಕ ರಾಜ್ಯದ ಪೀಡೆ ನಿರ್ವಹಣೆಯ ಸಮಗ್ರ ಚಿತ್ರಣವನ್ನು ಪಡೆಯುವುದು ಅಗತ್ಯವಾಗಿರುವುದರಿಂದ, ಕನಾರ್ಟಕ ಸರ್ಕಾರ ರಾಜ್ಯ ಕೃಷಿ ಇಲಾಖೆಯ ಮತ್ತು ರಾಜ್ಯ ತೋಟಗಾರಿಕೆ ಇಲಾಖೆಯು ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಕೃಷಿ ವಿಶ್ವವಿದ್ಯಾಲಯ, ರಾಯಚೂರಿನ ಮುಂದಾಳತ್ವದಲ್ಲಿ, ಉಳಿದ ಕೃಷಿ ಮತ್ತು ತೋಟಗಾರಿಕ ವಿಶ್ವವಿದ್ಯಾಲಯಗಳು ಮತ್ತು ಭಾರತಿಯ ಕೃಷಿ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯದಂತ ಅನುಷ್ಠಾನಗೊಳಿಸಲು ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರದ ಕೃಷಿ ಅನುದಾನದಡಿ ಅನುಷ್ಠಾನಗೊಂಡಿರುವ ಡಿಜಿಟಲ್ ಕೃಷಿ ಯೋಜನೆಯಲ್ಲಿ ಇ-ಸ್ಯಾಪ್ ತಂತ್ರಜ್ಞಾನ  ಒಂದು ಪ್ರಮುಖ ಅಂಶವಾಗಿದೆ.

  

For Further Details Contact: 

prabhuraj

ಡಾ. ಪ್ರಭುರಾಜ ಎ.,

ಪ್ರಾಧ್ಯಾಪಕರು ಮತ್ತು  ಮುಖ್ಯಸ್ಥರು, ಕೃಷಿ ಕೀಟಶಾಸ್ತ್ರ ವಿಭಾಗ,

ಕೃಷಿ ಮಹಾವಿದ್ಯಾಲಯ, ರಾಯಚೂರು

ಮೊ: 9480396607

ಮಿಂಚಂಚೆ: prabhusha2014@uasraichur.edu.in; prabhusha2014@gmail.com

 
watch vedio about eSAP: https://www.youtube.com/watch?v=MZIaZ1PJuno
 
Kannada English Brocher click here
https://drive.google.com/open?id=1GXs_RKAio0rbK3rORJR9kiZiGrT-GUPI

ಇತ್ತೀಚಿನ ನವೀಕರಣ​ : 21-07-2020 02:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080