ಅಭಿಪ್ರಾಯ / ಸಲಹೆಗಳು

ಶಿಕ್ಷಣ ನಿರ್ದೇಶಕರು

 

ಶಿಕ್ಷಣ ನಿರ್ದೇಶನಾಲಯ

                ಶೈಕ್ಷಣಿಕ ಆಡಳಿತ ವ್ಯವಸ್ಥೆಯು ಸಮಗ್ರವಾಗಿ ಶಿಕ್ಷಣ ನಿರ್ದೇಶನಾಲಯವನ್ನು ಹೊಂದಿದ್ದು ಅದರ ಬೆಂಬಲಕ್ಕೆ ಕುಲಸಚಿವರು, ಸಂಬಂಧಿತ ಮಹಾವಿದ್ಯಾಲಯಗಳ ಡೀನ್‍ರವರು, ಸ್ನಾತಕೋತ್ತರ ಡೀನ್, ಡೀನ್ ವಿದ್ಯಾರ್ಥಿ ಕಲ್ಯಾಣ, ಪರೀಕ್ಷಾ ನಿಯಂತ್ರಕರು, ಪ್ರಕಟಣಾ ಕೇಂದ್ರ ಹಾಗೂ ಗ್ರಂಥಾಲಯವನ್ನೂ ಹೊಂದಿದೆ.  ನಿರ್ದೇಶನಾಲಯಗಳು/ಅಧಿಕಾರಿಗಳು ಪ್ರಮುಖ ಹೊಣೆಗಾರಿಕೆ ಹಾಗೂ ಕಾರ್ಯ  ಚಟುವಟಿಕೆಗಳನ್ನು ಈ ಮುಂದೆ ನೀಡಲಾಗಿದೆ.

ಶಿಕ್ಷಣ ನಿರ್ದೇಶಕರು

ಅ.          ಶಿಕ್ಷಣ ತಂತ್ರಜ್ಞಾನದ ಸ್ಥಾನಿಕ ಸೂಚನೆ ಮತ್ತು ಅಭಿವೃದ್ಧಿ ಕುರಿತಂತೆ ಎಲ್ಲ ಶೈಕ್ಷಣಿಕ ಕಾರ್ಯನೀತಿ ಸಂಬಂಧಿತ ವಿಷಯಗಳ ಮತ್ತು ವ್ಯವಸ್ಥೆಗಳ ಸಂಯೋಜನೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಪರೀಕ್ಷೆಗಳ                ಮೇಲುಸ್ತುವಾರಿಯ ಜವಾಬ್ದಾರಿಯನ್ನು ಸಹ ನಿರ್ವಹಿಸುತ್ತಾರೆ.

ಆ.          ವಿಶ್ವವಿದ್ಯಾಲಯದ ಗ್ರಂಥಾಲಯ, ಪರೀಕ್ಷಾ ಕೇಂದ್ರ, ಪ್ರಕಟಣಾ ಕೇಂದ್ರ ಮತ್ತು ವಿಶ್ವವಿದ್ಯಾಲಯದ ಪ್ರಕಟಣೆಗಳ ಉಸ್ತುವಾರಿ ಮತ್ತು ಮೇಲ್ವಿಚಾರಣೆ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.

ಇ.          ಎಲ್ಲಾ ಮಹಾವಿದ್ಯಾಲಯಗಳ ಶೈಕ್ಷಣಿಕ ಚಟುವಟಿಕೆಗಳ ಮೇಲ್ವಿಚಾರಣೆ.

ಈ.         ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮಗಳ   ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.

ಉ.         ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳ ಶೈಕ್ಷಣಿಕ ಮಂಡಳಿ ಅಧ್ಯಕ್ಷರಾಗಿ ಶೈಕ್ಷಣಿಕ ಮಂಡಳಿಯ ದಾಖಲಾತಿಗಳ ನಿರ್ವಹಣೆ.

ಊ.       ಶೈಕ್ಷಣಿಕ ಪರಿಷತ್ತಿನ ಸದಸ್ಯ – ಕಾರ್ಯದರ್ಶಿಗಳಾಗಿ ಮತ್ತು ಶೈಕ್ಷಣಿಕ ಪರಿಷತ್ತಿನ ನಡಾವಳಿಗಳ ನಿರ್ವಹಣೆ.

ಎ.          ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಬೇರೆ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮಧ್ಯೆ ಉತ್ತಮ ಬಾಂಧವ್ಯ ಬಲಪಡಿಸುವಿಕೆ.

ಏ.          ವಿಶ್ವವಿದ್ಯಾಲಯದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣಗಳ ಕಾರ್ಯಕ್ರಮಗಳ ಆಯೋಜನೆ.

ಐ.          ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಎಲ್ಲಾ ಆಡಳಿತೆಯಲ್ಲಿ ಕುಲಪತಿಗಳಿಗೆ ಸಹಾಯಕರಾಗಿ ಮತ್ತು ಕುಲಪತಿಗಳು ವಹಿಸುವ ಇತರೆ ಕೆಲಸ ಮತ್ತು ಅಧಿಕಾರ ನಿರ್ವಹಣೆ.

ಒ.          ವ್ಯವಸ್ಥಾಪನಾ ಮಂಡಳಿ ಮತ್ತು/ಅಥವಾ ಕುಲಪತಿಗಳು ನಿರ್ದಿಷ್ಟಪಡಿಸಿರುವುದನ್ನು ಹೊರತುಪಡಿಸಿ ಕುಲಪತಿಗಳ ಅನುಪಸ್ಥಿತಿಯಲ್ಲಿಅವರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

 

ಇತ್ತೀಚಿನ ನವೀಕರಣ​ : 18-03-2024 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080