ಅಭಿಪ್ರಾಯ / ಸಲಹೆಗಳು

ಸ್ನಾತಕೋತ್ತರ ಪದವಿಗಳ ನಿರ್ದೇಶನಾಲಯ

 

ಡಾ|| ಗುರುರಾಜ ಸುಂಕದ
ಡೀನ್ (ಸ್ನಾತಕೋತ್ತರ)
ವಿಳಾಸ: ಸ್ನಾತಕೋತ್ತರ ನಿರ್ದೇಶನಾಲಯ
ಕೃ.ವಿ.ವಿ., ರಾಯಚೂರು- 584 104
ಸಂಚಾರ ದೂರವಾಣಿ : 9480696306
ಸ್ಥಿರ ದೂರವಾಣಿ : 08532-220 168
ದೂರ ಪತ್ರಕ : 08532-220 168
ಮಿಂಚಂಚೆ ವಿಳಾಸ: deanpgs@uasraichur.edu.in

                    ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು 2009ನೇ ಇಸವಿಯಲ್ಲಿ ಆಸ್ತಿತ್ವಕ್ಕೆ ಬಂದಿರುತ್ತದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಡಳಿತಾತ್ಮಕ ಅನುಸರಣಿಯಲ್ಲಿರುವ ಕಾಲದಲ್ಲಿ 1996ನೇ ಇಸವಿಯಲ್ಲಿ ಸ್ನಾತಕೋತ್ತರ ವಿದ್ಯಾಬೋಧನೆ ಬೇಸಾಯ ಶಾಸ್ತ್ರ, ಅನುವಂಶಿಕ ಮತ್ತು ಸಸ್ಯತಳಿ ಅಭಿವೃದ್ಧಿ, ಕೃಷಿ ಕೀಟಶಾಸ್ತ್ರ ಮತ್ತು ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ವಿಭಾಗಗಳಲ್ಲಿ ಪ್ರಾರಂಭಿಸಲಾಗಿದೆ. ತದನಂತರ ಹೆಚ್ಚುವರಿಯಾಗಿ 8 ವಿಭಾಗಗಳು ಇದಕ್ಕೆ ಸೇರ್ಪಡೆಗೊಂಡಿವೆ. ಪ್ರಸ್ತುತ ಕೃಷಿ ವಿಭಾಗಕ್ಕೆ ಸಂಬಂದಿಸಿದಂತೆ 12 ಶೈಕ್ಷಣಿಕ ವಿಷಯಗಳಲ್ಲಿ ಅಂದರೆ ಕೃಷಿ ಅರ್ಥಶಾಸ್ತ್ರ, ಕೃಷಿ ಕೀಟಶಾಸ್ತ್ರ, ಕೃಷಿ ವಿಸ್ತರಣೆ, ಕೃಷಿ ಸೂಕ್ಷ್ಮಜೀವಿ ಶಾಸ್ತ್ರ, ಬೇಸಾಯ ಶಾಸ್ತ್ರ, ಬೆಳೆ ಶರೀರ ಕ್ರೀಯಾಶಾಸ್ತ್ರ, ಅನುವಂಶಿಕ ಮತ್ತು ಸಸ್ಯತಳಿ ಅಭಿವೃದ್ಧಿ, ತೋಟಗಾರಿಕೆ, ಅಣುಜೀವ ಶಾಸ್ತ್ರ ಮತ್ತು ಕೃಷಿ ಜೈವಿಕ ತಂತ್ರಜ್ಞಾನ, ಸಸ್ಯರೋಗ ಶಾಸ್ತ್ರ, ಬೀಜ ವಿಜ್ಞಾನ ಮತ್ತು ತಾಂತ್ರಿಕತೆ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ಇತ್ಯಾದಿಗಳಲ್ಲಿ ಅದೇ ರೀತಿ ಕೃಷಿ ತಾಂತ್ರಿಕತೆ ವಿಭಾಗದಲ್ಲಿ ಸಂಬಂದಿಸಿದಂತೆ 3 ಶೈಕ್ಷಣಿಕ ವಿಷಯಗಳಲ್ಲಿ, ಕೃಷಿ ಯಂತ್ರೋಪಕರಣ ಶಕ್ತಿ ತಂತ್ರಜ್ಞಾನ, ಸಂಸ್ಕರಣ ಆಹಾರ ತಂತ್ರಜ್ಞಾನ, ಮಣ್ಣು ಮತ್ತು ನೀರು ತಂತ್ರಜ್ಞಾನ ಇತ್ಯಾದಿಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ನಡೆಸಲಾಗುತ್ತಿದೆ. ಮುಂದುವರೆದು ಕೃಷಿ ವಿಭಾಗಕ್ಕೆ ಸಂಬಂದಿಸಿದಂತೆ ಅಣುಜೀವ ಶಾಸ್ತ್ರ ವಿಷಯವನ್ನು ಹೊರತುಪಡಿಸಿ ಉಳಿದ 11 ಶೈಕ್ಷಣಿಕ ವಿಷಯಗಳಲ್ಲಿ ಪಂಡಿತ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ನಡೆಸಲಾಗುತ್ತಿದೆ. ಕೃಷಿ ತಾಂತ್ರಿಕತೆ ವಿಭಾಗದಲ್ಲಿ ಮೇಲೆ ತಿಳಿಸಿದ 3 ಶೈಕ್ಷಣಿಕ ವಿಷಯಗಳಲ್ಲಿ ಪಂಡಿತ ಪದವಿಗಳ ವಿದ್ಯಾಬೊಧನೆಯನ್ನು ಮಾಡಲಾಗುತ್ತಿದೆ. ಕೃಷಿ ವಿಭಾಗ ಮತ್ತು ಕೃಷಿ ತಾಂತ್ರಿಕತೆ ವಿಭಾಗದ ಸ್ನಾತಕೋತ್ತರ ಪದವಿಗಳನ್ನು ಅನುಕ್ರಮವಾಗಿ ರಾಯಚೂರು ಆವರಣದ ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ನಡೆಸಲಾಗುತ್ತಿದೆ.


ಸ್ನಾತಕೋತ್ತರ ಪದವಿಯ ಕಾಲಮಿತಿ ಎರಡು ಶೈಕ್ಷಣಿಕ ವರ್ಷಗಳು (4 ಷಣ್ಮಾಸಿಕಗಳು) ಮತ್ತು ಪಂಡಿತ ಪದವಿಯ ಕಾಲಮಿತಿ ಮೂರು ಶೈಕ್ಷಣಿಕ ವರ್ಷಗಳು (6 ಷಣ್ಮಾಸಿಕಗಳು) ಇರುವಂತೆ ನಿಗದಿಪಡಿಸಲಾಗಿದೆ. ಕರ್ನಾಟಕ ರಾಜ್ಯದ 5 ಕೃಷಿ ವಿಶ್ವವಿದ್ಯಾಲಯಗಳು ಜಂಟಿಯಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಮುಖಾಂತರ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ನೀಡಲಾಗುತ್ತದೆ.


ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಪ್ರಾರಂಭ ವರ್ಷವಾದ 2009-10ನೇ ಶೈಕ್ಷಣಿಕ ವರ್ಷದಲ್ಲಿ ಕೇವಲ 78 ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ಸಂಖ್ಯೆ ಸ್ಥಿರವಾಗಿ ಬೆಳೆದು 2019-20 ಶೈಕ್ಷಣಿಕ ವರ್ಷದಲ್ಲಿ 110ಕ್ಕೆ ಏರಿದೆ. ಅದೇ ರೀತಿ 2011-12ನೇ ಶೈಕ್ಷಣಿಕ ವರ್ಷದಲ್ಲಿ ಕೇವಲ 17 ವಿದ್ಯಾರ್ಥಿಗಳು ಪಂಡಿತ ಪದವಿಗೆ ಪ್ರವೇಶ ಪಡೆದಿದ್ದರು. ಈ ಸಂಖ್ಯೆ ಬೆಳೆದು 2019-20 ಶೈಕ್ಷಣಿಕ ವರ್ಷದಲ್ಲಿ 31 ಪಂಡಿತ ಪದವಿ ವಿದ್ಯಾರ್ಥಿಗಳು ಪ್ರವೇಶ ಪಡೆದಿಕೊಂಡಿದ್ದಾರೆ. 2010-11ನೇ ಶೈಕ್ಷಣಿಕ ವರ್ಷದಲ್ಲಿ ಕೇವಲ 35 ಸ್ನಾತಕೋತ್ತರ ವಿದ್ಯಾರ್ಥಿಗಳು ತೇರ್ಗಡೆಯಾದರೆ 2018-19ನೇ ವರ್ಷಕ್ಕೆ ಈ ಸಂಖ್ಯೆ 135ಕ್ಕೆ ಏರಿದೆ. ಅದೇ ರೀತಿ 2014-15 ಶೈಕ್ಷಣಿಕ ವರ್ಷದಲ್ಲಿ ಕೇವಲ 12 ಪಂಡಿತ ಪದವಿ ವಿದ್ಯಾರ್ಥಿಗಳು ತೇರ್ಗಡೆಯಾದರೆ 2018-19 ವರ್ಷದಲ್ಲಿ 33 ವಿದ್ಯಾರ್ಥಿಗಳು ಉತ್ತೀರ್ಣರಾದರು. ಸ್ನಾತಕೋತ್ತರ ವಿದ್ಯಾಬೋಧನೆ ಪ್ರಾರಂಭವಾಗಿದ ವರ್ಷದಿಂದÀ ಇಲ್ಲಿಯವರೆಗೆ 784 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಮತ್ತು 91 ವಿದ್ಯಾರ್ಥಿಗಳು ಪಂಡಿತ ಪದವಿಯನ್ನು ಪಡೆದಿರುತ್ತಾರೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು 23 ರಾಷ್ಟ್ರೀಯ ಮತ್ತು 11 ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸ್ನಾತಕೋತ್ತರ ವಿಷಯಗಳ ಸಂಶೋಧನಾ ಸಂಬಂದ ಒಡಂಬಡಿಕೆ ಮಾಡಿಕೊಂಡಿರುತ್ತದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರ ಉಪಯೋಗಕ್ಕಾಗಿ ಸ್ನಾತಕೋತ್ತರ ನಿರ್ದೇಶನಾಲಯ ಕೆಳಗೆ ನಮೂದಿಸಿದ ಕಿರು ಹೊತ್ತಿಗೆಗಳನ್ನು ಬಿಡುಗಡೆಗೊಳಿಸಿದೆ.


 ಶೈಕ್ಷಣಿಕ ಮಾಹಿತಿ ಮತ್ತು ನಿಯಮಾವಳಿಗಳು 2019-20.
 ಸ್ನಾತಕೋತ್ತರ ಮತ್ತು ಪಂಡಿತ ಪದವಿಗಳ ಸಂಶೋಧನಾ ಪ್ರಬಂದಗಳ ಸಿದ್ಧತೆ.
ಭವಿಷ್ಯದ ದೃಷ್ಟಿಕೋನ:- ಸ್ನಾತಕೋತ್ತರ ನಿರ್ದೇನಾಲಯವು ಕೆಳಗೆ ನಮೂದಿಸಿದ ಉದ್ದೇಶಗಳನ್ನು ಈಡೇರಿಸಲು ಸದಾ ಕಾರ್ಯೋನ್ಮುಖವಾಗಿರುತ್ತದೆ.
 ಕೃಷಿ ಮತ್ತು ತತ್ಸಂಬಂಧಿತ ಕ್ಷೇತ್ರಗಳ ಪೈಕಿ ಉನ್ನತ ಮಟ್ಟದ ತರಬೇತಿಗಳ ಮುಖಾಂತರ ಯುವಪೀಳಿಗೆಗಳಲ್ಲಿ ಸಂಶೋಧನಾ ಮುಂದಾಳತ್ವ ಮತ್ತು ವ್ಯವಸ್ಥಾಪಕ ವೃತ್ತಿಪರತೆಯನ್ನು ನೆಲೆಗೊಳಿಸುವುದು.
 ಹೊಸ ಹೊಸ ಉದಯೋನ್ಮುಖ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಗಳ ಮುಖಾಂತರ ಅನುಭವ ಆಧಾರಿತ ಕಲಿಕೆಯನ್ನು ಒದಗಿಸಿ ಅವರ ಕಾರ್ಯಕ್ಷಮತೆಯನ್ನು ಉನ್ನತೀಕರಿಸುವುದು.  ಹೆಚ್ಚಿನ ಮಾಹಿತಿಗಾಗಿ...

ಇತ್ತೀಚಿನ ನವೀಕರಣ​ : 24-02-2023 11:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080