ಅಭಿಪ್ರಾಯ / ಸಲಹೆಗಳು

ಪೀಡೆನಾಶಕ ಅವಶೇಷ ಹಾಗೂ ಆಹಾರ ಗುಣ ವಿಶ್ಲೇಷಣೆ ಪ್ರಯೋಗಾಲಯ

 

             ಕೃಷಿ ವಿಶ್ವವಿದ್ಯಾಲಯ, ರಾಯಚೂರು, 2013 ರಲ್ಲಿ ಭಾರತೀಯ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನಾ (RKVY) ಮತ್ತು ಭಾರತ ಸರಕಾರ ಆಹಾರ ಸಂಸ್ಕರಣ ಮಂತ್ರಾಲಯ (MOFPI) ಅನುಧಾನದಿಂದ ಪೀಡೆನಾಶಕ ಅವಶೇಷ ಹಾಗೂ ಆಹಾರ ಗುಣ ವಿಶ್ಲೇಷಣೆ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಸದರಿ ಪ್ರಯೋಗಾಲಯಕ್ಕೆ ಅಗತ್ಯವಿರುವ ಅತ್ಯಾಧುನಿಕ ಮತ್ತು ವೈಜ್ಞಾನಿಕವಾಗಿ ಶಿಫಾರಸ್ಸ್ಸುಗೊಂಡಿರುವ ಯಂತ್ರೋಪಕರಣಗಳ ಸೌಕÀರ್ಯಗಳನ್ನು ಸುಸಜ್ಜಿತಗೊಳಿಸಲಾಗಿದೆ. ಪೀಡೆನಾಶಕÀ ಅವಶೇಷ ಮತ್ತು ಆಹಾರ ಗುಣ ವಿಶ್ಲೇಷಣೆ ಪ್ರಯೋಗಾಲಯವು 2016 ರಿಂದ ವೈಜ್ಞಾನಿಕವಾಗಿ ಆಹಾರ ಗುಣ ವಿಶ್ಲೇಷಣೆ ಮಾಡುತ್ತಿದ್ದು, ಅದಕ್ಕೆ ಸಂಬಂಧಿಸಿದ ಪ್ರಮಾಣಿತ ವಿಧಾನಗಳನ್ನು ಸಿದ್ಧಪಡಿಸಿದೆ. ಈ ಪ್ರಯೋಗಾಲಯದಲ್ಲಿ ಪೀಡೆನಾಶಕಗಳು, ಲಘು ಪೋಷಕಾಂಶಗಳು, ಭಾರವಾದ ಲೋಹಗಳು/ಧಾತುರೂಪಗಳು ಮತ್ತು ಆಹಾರ ಗುಣವಿಶ್ಲೇಷಣೆಯನ್ನು ಮಾಡಲಾಗುವುದು. ಆಹಾರ ಧಾನ್ಯಗಳಾದÀ ಅಕ್ಕಿ, ಭತ್ತ, ತೊಗರಿ, ತೊಗರಿ ಬೇಳೆ, ಮೆಣಸಿನಕಾಯಿ, ಒಣ ಮೆಣಸಿನಕಾಯಿ, ಹಣ್ಣು ಮತ್ತು ತರಕಾರಿಗಳಲ್ಲಿ ವಿವಿಧ ಗುಂಪಿಗೆ ಸೇರಿದ ಪೀಡೆನಾಶಕಗಳ ಅವಶೇಷ, ಭಾರವಾದ ಲೋಹಗಳು/ಧಾತುರೂಪಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ.

       ಈ ಪ್ರಯೋಗಾಲಯವು ತರಬೇತಿ ಪಡೆದ ಮತ್ತು ಅನುಭವವಿರುವ ಪರಿಣಿತ ವಿಜ್ಞಾನಿಗಳನ್ನು ಒಳಗೊಂಡಿದೆ ಹಾಗೂ Bureau of Indian Standard ಮತ್ತು Association of Official Analytical Chemists (AOAC) Internationals ಅಭಿವೃದ್ಧಿ ಪಡಿಸಿದ ಪ್ರಮಾಣಿತ  ವಿಧಾನಗಳನ್ನು ಗುಣಮಟ್ಟ ವಿಶ್ಲೇಷಣೆಗಾಗಿ ಅಳವಡಿಸಿಕೊಳ್ಳಲಾಗಿರುತ್ತದೆ.

       ಈ ಪ್ರಯೋಗಾಲಯವು 12.07.2018 ರಿಂದ National Accreditation Board for Testing and Calibration Laboratories (NABL)  ದಿಂದ ISO/IEC 17025:2017 (General Requirements for the Competence of Testing and Calibration Laboratories) ಮಾನ್ಯತೆಯನ್ನು ಪಡೆದಿದೆ. ಓಂಃಐ ಭಾರತ ಸರಕಾರದ ಒಂದು ಸ್ವ್ವಾಯತ್ತತ ಸಂಸ್ಥೆಯಾಗಿದ್ದು ವೈಜ್ಞಾನಿಕ ವಿಶ್ಲೇಷಣೆ ಕ್ಷೇತ್ರದಲ್ಲಿ ಪರೀಕ್ಷೆ ಮತ್ತು ಮಾಪನಾಂಕÀ ಪ್ರಮಾಣೀಕರಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿಯಾಗಿದೆ. ಇದರ ಅಡಿಯಲ್ಲಿ ಬರುವ ISO/IEC 17025:2017 ರಾಸಾಯನಿಕಗಳ ವಿಶ್ಲೇಷಣೆಯಲ್ಲಿ ಕೃ.ವಿ.ವಿ. ರಾಯಚೂರಿನ ಪ್ರಯೋಗಾಲಯವು ಹಲವು ಪ್ರಕಾರದ ಪರೀಕ್ಷೆ ಮತ್ತು ಮೌಲ್ಯ ಮಾಪನದಲ್ಲಿ ಭಾಗವಹಿಸಿ ಪೀಡೆನಾಶಕಗಳ ಅವಶೇಷ, ಭಾರವಾದ ಲೋಹಗಳ/ಧಾತುರೂಪಗಳ ಮತ್ತು ಆಹಾರ ಗುಣ ವಿಶ್ಲೇಷಣೆಯಲ್ಲಿ ಪ್ರಮಾಣಿಕರಿಸಿದ ಮಾನ್ಯತೆಯನ್ನು ಪಡೆದಿದೆ.

 

ಈ ಪ್ರಯೋಗಾಲಯವು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ, ಆಹಾರ ಸಂಸ್ಕರಣಾ ಘಟಕದ ಉದ್ದಿಮೆದಾರರಿಗೆ, ವಿವಿಧ ಆಹಾರ ಪದಾರ್ಥಗಳನ್ನು ರಫ್ತು ಮಾಡುವ ಸಂಸ್ಥೆಗಳಿಗೆ, ದೇಶದ ವಿವಿಧ ಸಂಸ್ಥೆಯ ಸಂಶೋಧಕರಿಗೆ ವೈಜ್ಞಾನಿಕ ಸೌಕರ್ಯವನ್ನು ಬಳಸಿಕೊಳ್ಳಲು ಅನುಕೂಲವಾಗಿದೆ. ಈ ಪ್ರಯೋಗಾಲಯ ಅಭಿವೃದ್ಧಿಯಿಂದ ವಿಶ್ವವಿದ್ಯಾಲಯದ ಘನತೆಯು ಕೂಡ ಹೆಚ್ಚಿದೆ. ಈ ಮೂಲಕ ಎಲ್ಲಾ ಸಂಬಂದಿತ ಗ್ರಾಹಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Dr. Prabhuraj  A ,

ಪ್ರಾಧ್ಯಾಪಕರು ಕೃಷಿ ಕೀಟಶಾಸ್ತ್ರ ಮತ್ತು ಮುಖ್ಯಸ್ಥರು

ಪೀಡೆನಾಶಕ ಅವಶೇಷ ಹಾಗೂ ಆಹಾರ ಗುಣ ವಿಶ್ಲೇಷಣೆ ಪ್ರಯೋಗಾಲಯ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು - 584 104

ದೂರವಾಣಿ: 08532-221990 (ಔ)

+91-9480396607

 

ಮಿಂಚಂಚೆ:head.prfqal@gmail.com , prfqlab@uasraichur.edu.in

 

ಇತ್ತೀಚಿನ ನವೀಕರಣ​ : 20-10-2023 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080