ಅಭಿಪ್ರಾಯ / ಸಲಹೆಗಳು

ಸಾವಯವ ಕೃಷಿ ಸಂಶೋಧನಾ ಸಂಸ್ಥೆ

ಸಂಸ್ಥೆಯ ಸ್ಥೂಲ ಉದ್ದೇಶಗಳು:

  1. ರೈತರು ಅನುಸರಿಸುವ ಅಸ್ತಿತ್ವದಲ್ಲಿರುವ ಸಾವಯವ ಕೃಷಿ ಪದ್ಧತಿಗಳ (ಐಟಿಕೆಗಳು) ಸಮೀಕ್ಷೆ, ದಾಖಲಾತಿ ಮತ್ತು ವೈಜ್ಞಾನಿಕ ಮೌಲ್ಯಮಾಪನ.
  2. ಉತ್ಪಾದಕತೆ, ಲಾಭದಾಯಕತೆ ಮತ್ತು ಮಣ್ಣಿನ ಆರ್ಯೋಗ್ಯವನ್ನು ನಿರ್ವಯಿಸಲು ಒಣ ಬೇಸಾಯ ಮತ್ತು ನೀರಾವರಿ ಪರಿಸರ ವ್ಯವಸ್ಥೆಗಳ ಅಡಿಯಲ್ಲಿ ವಿವಿಧ ಬೆಳೆಗಳ ಸಾವಯವ ಉತ್ಪಾದನೆ ಮತ್ತು ಬೆಳೆ ಪದ್ಧತಿಗಳ ಶಿಷ್ಟಾಚಾರವನ್ನು ಪ್ರಮಾಣೀಕರಿಸಲು ದೀರ್ಘಾವಧಿಯ ನಿರ್ಧಿಷ್ಠ ಸ್ಥ¼,À ಬೇಡಿಕೆ ಚಾಲಿತ ಮತ್ತು ರೈತರು ಆಧಾರಿತ ಸಂಶೋಧನೆಗಳನ್ನು ಕೈಗೊಳ್ಳುವುದು.
  3. ಬೆಳೆ ಪದ್ಧತಿಗಳನ್ನು ವೈವಿಧ್ಯಗೊಳಿಸುವದು ಮತ್ತು ಈ ಪ್ರದೇಶದಲ್ಲಿನ ವೈವಿಧ್ಯಮಯ ಕೃಷಿ- ಹವಾಮಾನ ವಲಯಗಳಿಗೆ (ವಲಯ-1, 2 ಮತ್ತು 3) ಸೂಕ್ತವಾದ ಸಮಗ್ರ ಸಾವಯವ ಕೃಷಿ ಪದ್ಧತಿಯ ಮಾದರಿಗಳನ್ನು ಅಭಿವೃದ್ಧಿಪಡಿಸುವದು ಮತ್ತು ಉತ್ತೇಜಿಸುವುದು.
  4. ದಕ್ಷ ಸೂಕ್ಷ್ಮಜೀವಿಯ ತಳಿಗಳನ್ನು ಅಭಿವೃದ್ಧಿಪಡಿಸುವದು, ಜೈವಿಕ ಗೊಬ್ಬರಗಳು, ಜೈವಿಕ-ಕೀಟನಾಶಕಗಳು ಮತ್ತು ಸಾವಯವ ಗೊಬ್ಬರಗಳ ಸಾಮೂಹಿಕ ಉತ್ಪಾದನಾ ಘಟಕಗಳನ್ನು ದೊಡ್ಡ ಪ್ರಮಾಣದ ಉತ್ಪಾದನೆ, ಪ್ರದರ್ಶನ ಮತ್ತು ಪೂರೈಕೆ.
  5. ಸಂಪನ್ಮೂಲ ಮರುಬಳಕೆಗಾಗಿ ಕೃಷಿ ತ್ಯಾಜ್ಯಗಳನ್ನು ತ್ವರಿತವಾಗಿ ಕಾಂಪೋಸ್ಟ್ ಮಾಡಲು ವೆಚ್ಚದಾಯಕವಲ್ಲದ ಹೊಸ ತಂತ್ರಜ್ಞಾನಗಳನ್ನು ಅಭಿವೃಧ್ಧಿಪಡಿಸುವುದು.
  6. ಸಾವಯವ ಕೃಷಿಯ ಬಗ್ಗೆ ಕರ್ನಾಟಕ ರಾಜ್ಯ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾಲಕಾಲಕ್ಕೆ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಮಧ್ಯಸ್ಥಿಕೆಗಳು, ಬೆಂಬಲ ಮತ್ತು ಪರಿಹಾರಗಳನ್ನು ಒದಗಿಸುವುದು.
  7. ಸಾವಯವ ಕ್ಷೇತ್ರದ ಅಗತ್ಯಗಳನ್ನು ಪೂರೈಸಲು ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು.
  8. ಪ್ರಮಾಣೀಕರಣ, ಮಾರುಕಟ್ಟೆ ಸಂಪರ್ಕ ಮತ್ತು ಜಾಗೃತಿಗೆ ಅನುಕೂಲವಾಗುವಂತೆ ರೈತ ಗುಂಪುಗಳನ್ನು ಉತ್ತೇಜಿಸುವುದು.

 

ಅಭಿವೃದ್ಧಿಪಡಿಸಲಾದ ಮೂಲಸೌಕರ್ಯ ಸೌಲಭ್ಯಗಳು ಮತ್ತು ನೀಡಲಾಗುತ್ತಿರುವ ಸೇವೆಗಳು:

  1. ಸಂಸ್ಥೆಯ ಕಛೇರಿ ಕಟ್ಟಡದ ಜೊತೆಗೆ ವಿವಿಧ ವಿಷಯಗಳ ಸಂಶೋಧನಾ ಪ್ರಯೋಗಾಲಯ.
  2. 20 ಎಕರೆ ಪ್ರದೇಶದಲ್ಲಿ ಎನ್‍ಪಿಒಪಿ ಮಾನದಂಡಗಳ ಪ್ರಕಾರ ಪ್ರದರ್ಶನ ಮತ್ತು ಸಂಶೋಧನಾ ವಿಭಾಗಕ್ಕಾಗಿ ಸಮಗ್ರ ಸಾವಯವ ಕೃಷಿ ಪದ್ಧತಿ ಮಾದರಿಯೊಂದಿಗೆ ಜೈವಿಕ ಕೃಷಿ.
  3. ಜೈವಿಕ ಗೊಬ್ಬರಗಳು, ಜೈವಿಕ ಕೀಟನಾಶಗಳು ಮತ್ತು ಸಾವಯವ ಗೊಬ್ಬರಗಳ ಸಾಮೂಹಿಕ ಉತ್ಪಾದನೆ ಮತ್ತು ಪೂರೈಕೆ.
  4. ಸ್ನಾತಕ ಮತ್ತು ಸ್ನಾತಕೋತ್ತರ ಕೃಷಿ ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಹೊರತಾಗಿ, ಎಲ್ಲಾ ವಿಸ್ತರಣಾ ಸೇವೆಗಳ ಮೂಲಕ ಎಲ್ಲಾ ಸಾವಯವ ಪಾಲುದಾರರಿಗೆ ಸಾಮಥ್ರ್ಯಭಿವೃದ್ಧಿ ಪಡಿಸುವದು.
  5. ಮಣ್ಣು, ನೀರು, ಸಸ್ಯ ಮತ್ತು ಸಾವಯವ ಗೊಬ್ಬರಗಳ ಗುಣಮಟ್ಟ ವಿಶ್ಲೇಷಣೆ.

 

ಸಂಶೋಧನಾ ಸಾಧನೆಗಳು:

  1. ಹೆಸರು, ಹಿಂಗಾರಿ ಜೋಳ, ತೊಗರಿ, ಸೂರ್ಯಕಾಂತಿ, ಕಡಲೆ ಮತ್ತು ಭತ್ತದ ಸಾವಯವ ಉತ್ಪಾದನಾ ತಂತ್ರಜ್ಞಾನಗಳು.
  2. ತೊಗರಿ ಮತ್ತು ಹತ್ತಿಯ ಬೆಳೆ ಉಳಿಕೆಗಳ ಶೀಘ್ರ ಕಾಂಪೋಸ್ಟ್ ತಯಾರಿಕಾ ತಾಂತ್ರಿಕತೆ.

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

 

ಡಾ|| ಎಮ್. ಭೀಮಣ್ಣ

ಪ್ರಾಧ್ಯಾಪಕರು ಕೃಷಿ ಕೀಟಶಾಸ್ತ್ರ ಮತ್ತು ಮುಖ್ಯಸ್ಥರು

ಸಾವಯವ ಕೃಷಿ ಸಂಶೋಧನಾ ಸಂಸ್ಥೆ

ಇತ್ತೀಚಿನ ನವೀಕರಣ​ : 20-07-2020 03:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080