
ಮುಖ್ಯ ಕೃಷಿ ಸಂಶೋಧನಾ ಕೇಂದ್ರವು 1932 ರಲ್ಲಿ ಸ್ಥಾಪನೆಗೊಂಡಿತು. ಇದು ರಾಯಚೂರು ನಗರದಿಂದ 4 ಕಿಮೀ ದೂರದಲ್ಲಿ ರಾಯಚೂರು-ಲಿಂಗಸುಗೂರು ರಸ್ತೆಯಲ್ಲಿರುತ್ತದೆ. ಈ ಕೇಂದ್ರವು ಸಮುದ್ರ ಮಟ್ಟಕ್ಕಿಂತ 389 ಮೀಟರ್ ಎತ್ತರದಲ್ಲಿರುತ್ತದೆ.16015’ ಉತ್ತರ ಅಕ್ಷಾಂಶ ಮತ್ತು 17020’ ಪೂರ್ವ ರೇಖಾಂಶಗಲ್ಲಿರುತ್ತದೆ. ಈ ಕೇಂದ್ರದ ವರ್ಷದ ಸರಾಸರಿ ಮಳೆಯು 669 ಮಿಮೀ ಆಗಿರುತ್ತದೆ. ಈ ಕೇಂದ್ರದ ಸರಾಸರಿ ಗರಿಷ್ಠ ತಾಪಮಾನ 330 ಸೆ. ಆಗಿದ್ದು ಸರಾಸರಿ ಕನಿಷ್ಠ ತಾಪಮಾನ 210 ಸೆ ಆಗಿರುತ್ತದೆ. ಈ ಕೇಂದ್ರದ ಹವಾಮಾನವು ಉಷ್ಣವಲಯದ್ದಾಗಿದ್ದು, ಮಣ್ಣು ಮಾದರಿಯ ಮಾಧ್ಯಮ ದಿಂದ ಆಳ ಕಪ್ಪು ಮಣ್ಣು ಮತ್ತು ಆಳವಿಲ್ಲದ ಕೆಂಪು ಮಣ್ಣುನಿಂದ ಕೂಡಿರುತ್ತದೆ. ಈ ಕೇಂದ್ರದ ಒಟ್ಟು ಕ್ಷೇತ್ರವು 241 ಹೆಕ್ಟೇರ್ ಆಗಿರುತ್ತದೆ. ಅದರಲ್ಲಿ 71.05 ಹೆಕ್ಟೇರ್ ನೀರಾವರಿಯಲ್ಲಿದ್ದು, 69.54 ಹೆಕ್ಟೇರ್ ಮಾಳೆಯಾಶ್ರಿತ ಪ್ರದೇಶವಾಗಿದೆ. ಈ ಕೇಂದ್ರದ ಮುಖ್ಯ ಉದ್ದೇಶಗಳೆಂದರೆ: ಈ ಭಾಗದ ಮುಖ್ಯ ಬೆಳೆಗಳಾದ ಹತ್ತಿ, ಜೋಳ, ಸೂರ್ಯಕಾಂತಿ, ಶೇಂಗಾ, ತೊಗರಿ ಮತ್ತು ಅಗಸೆ ಬೆಳೆಗಳಲ್ಲಿ ಕಂಡು ಬರುವ ಸಮಸ್ಯೆಗಳ ಬಗ್ಗೆ ಸಂಶೋಧನೆ ತೆಗೆದುಕೊಳ್ಳುವುದು, ಎಣ್ಣೆ ಕಾಳು ಬೆಳೆಗಳಾದ ಸೂರ್ಯಕಾಂತಿ, ಶೇಂಗಾ,ಔಡಲ, ಕುಸುಬೆ, ಅಗಸೆ, ಎಳ್ಳು ಮತ್ತು ಗುರ್ರೆಳ್ಳು ಬೆಳೆಗಳಲ್ಲಿ ಸಂಶೋಧನಾ ಚಟುವಟಿಕೆಗಳನ್ನು ತೆಗೆದುಕೊಳ್ಳಲು, ಈ ಭಾಗದ ರೈತರಿಗಾಗಿ ಬೀಜೋತ್ಪಾದನೆಯನ್ನು ತೆಗೆದುಕೊಳ್ಳುಲು, ತೋಟಗಾರಿಕೆ ಬೆಳೆಗಳಾದ ಮಾವು, ಸಪೋಟ, ನಿಂಬೆ ಮುಂತಾದ ಬೆಳಗಳಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಹೆಚ್ಚಿಸಲು, ಕೃಷಿ ಸಂಭಂಧಿತ ಚಟುವಟಿಕೆಗಳಾದ ಹೈನುಗಾರಿಕೆ, ಮೀನುಗಾರಿಕೆ, ಕ್ಷೇತ್ರ ಯಂತೋಪಕರಗಳು, ಆಹಾರ ಸಂಸ್ಕರಣೆ ಮತ್ತು ಕೊಯ್ಲುನೋತ್ರರ ತಂತ್ರಜ್ಞಾನ, ಮಣ್ಣು ಮತ್ತು ನೀರಿನ ಸಂರಕ್ಷಣೆಗಳಾಗಿರುತ್ತವೆ. ಈ ಭಾಗದ ಕೃಷಿ ಮತ್ತು ಕೃಷಿಯೇತರ ಸಮಸ್ಯಗಳನ್ನು ನಿಭಾಯಿಸಲು ಮುಖ್ಯ ಉದ್ದೇಶವನ್ನು ಹೊಂದಿದೆ.
ಈ ಭಾಗದಲ್ಲಿ ಮುಂಗಾರು ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಔಡಲ, ಕುಸುಬೆ, ಎಳ್ಳು, ಹತ್ತಿ, ತೊಗರಿ ಮತ್ತು ಮೇವಿನ ಬೆಳೆಗಳು ಮುಖ್ಯವಾಗಿರುತ್ತದೆ. ಹಿಂಗಾರು ಬೆಳೆಗಳಾದ ಹಿಂಗಾರಿ ಜೋಳ, ಗುರ್ರೆಳ್ಳು, ಅಗಸೆ, ಕಡಲೆ ಬೆಳೆಗಳು ಮುಖ್ಯವಾಗಿದೆ. ಹತ್ತಿ ಮತ್ತು ತೊಗರಿಯನ್ನು ಏಕ ಬೆಳೆಗಳಾಗಿ ಬೆಳೆಯುತ್ತಾರೆ. ಕಪ್ಪು ಮಣ್ಣಿನಲ್ಲಿ ವರ್ಷಕ್ಕೆ ಎರಡು ಬೆಳೆಗಳಾಗಿ, ಸೂರ್ಯಕಾಂತಿ ನಂತರ ಕಡಲೆ, ಶೇಂಗಾ ನಂತರ ಶೇಂಗಾ ಮತ್ತು ಶೇಂಗಾ ನಂತರ ಸೂರ್ಯಕಾಂತಿಯನ್ನು ಬೆಳೆಯುತ್ತಾರೆ.
ಈ ಸಂಶೋಧನಾ ಕೇಂದ್ರದಲ್ಲಿ ಒಟ್ಟು 9 ಅಖಿತ ಭಾರತ ಸಮನ್ವಯ ಸಂಶೋಧನಾ ಯೋಜನೆಗಳಾದ ಹತ್ತಿ, ಸೂರ್ಯಕಾಂತಿ, ಅಗಸೆ, ಶೇಂಗಾ, ಜೈವಿಕ ನಿಯಂತ್ರಣ, ಕಳೆ ನಿರ್ವಹಣೆ, ಒಣ ಬೇಸಾಯ, ಔಡಲ ಮತ್ತು ಮೇವಿನ ಬೆಳೆಗಳಲ್ಲಿ ಸಂಶೋಧನೆ ನಿರ್ವಹಿಸಲಾಗುತ್ತಿದೆ.
ಮುಖ್ಯ ಕೃಷಿ ಸಂಶೋಧನಾ ಕೇಂದ್ರದಿಂದ ಬಿಡುಗಡೆಗೊಂಡ ತಳಿಗಳು/ ಸಂಕರಣ ತಳಿಗಳು
ಹತ್ತಿ: ಆರ್.51, ಡಿಬಿ.3-12, ಆರ್‍ಎಹೆಚ್-100, ಆರ್‍ಎಹೆಚ್-1, ಆರ್‍ಎಹೆಚ್‍ಎಸ್-14, ಎಸ್‍ಸಿಎಸ್-793, ಎಸ್‍ಹೆಚ್‍ಹೆಚ್-818, ಬಿಜಿಡಿಎಸ್-1063, ಬಿಡಿಜಿಹೆÀಚ್‍ಹೆಚ್-697 ಮತ್ತು ಬಿಡಿಜಿಎಸ್-1033
ಶೇಂಗಾ: ಎಸ್-206, ಕೆಆರ್‍ಜಿ-1, ಜೆಎಲ್-24, ಐಸಿಜಿಎಸ್-11, ಆರ್-8808, ಆರ್-9251, ಆರ್-2001-3, ಆರ್-2001-3, ಆರ್-2001-2 (ವಿಜೇತ), ಎಸ್-230 (ಬಳ್ಳಿಯ ತಳಿ), ಕೆ-9 (ಅಳವಡಿಕೆ) ಮತ್ತು ಕೆಡಿಜಿ-128 (ಅಳವಡಿಕೆ)
ಸೂರ್ಯಕಾಂತಿ: ಹೊಸ ಮಾರ್ಡನ್, ಆರ್‍ಎಸ್‍ಎಫ್‍ಹೆಚ್-1, ಆರ್‍ಎಸ್‍ಎಫ್‍ಹೆಚ್-130, ಆರ್‍ಎಸ್‍ಎಫ್‍ವಿ-90 ಮತ್ತು ಆರ್‍ಎಸ್‍ಎಫ್‍ಹೆಚ್-1887
ಮೇವುಬೆಳೆಗಳು: ಎಸ್‍ಎಸ್‍ಬಿ-74, ಎಸಿಬಿಎಸ್-1, ಡಿಹೆಚ್‍ಎಸ್-6, ನಂದಿನಿ, ಸಮೃದ್ಧಿ
ಸೆಟೇರಿಯಾ: ಆರ್‍ಎಸ್-118
ಹಿಂಗಾರು ಜೋಳ: ಆರ್‍ಎಸ್‍ಹಚ್-1, ಜಿಎಸ್-23
ಗುರ್ರೆಳ್ಳು: ಎಸ್-144
ಔಡಲ: ಆರ್‍ಸಿ-8, ಅರುಣ, 48-1, ಎಸ್‍ಹೆಚ್-41, ಜಿಸಿಹೆಚ್-4
ಏಳ್ಳು: ನಂ.71, ಆರ್‍ಸಿಆರ್-18
ಅಗಸೆ: ಎನ್‍ಎಲ್-115
ಕೇಂದ್ರದಲ್ಲಿ ಲಭ್ಯವುಳ್ಳ ವಿಶೇಷ ಉಪಕರಣಗಳು ಯಂತ್ರಗಳು ಮತ್ತು ಪ್ರಯೋಗಾಲಯಗಳು
ಅಣ್ವಿಕ ಪ್ರಯೋಗಾಯವು ಇತ್ತೀಚಿನ ಉತ್ತಮ ಉಪಕರಣಗಳನ್ನು ಹೊಂದಿದೆ. ಎನ್‍ಎಮ್‍ಆರ್ ಉಪಕರಣವು ಎಲ್ಲಾ ಎಣ್ಣೆ ಕಾಳು ಬೆಳೆಗಳ ಎಣ್ಣೆ ಅಂಶವನ್ನು ಕಂಡು ಹಿಡಿಯಲು ಈ ಕೇಂದ್ರವು ಹೊಂದಿದೆ. ಪಾಲಿ ಮನೆಗಳು, ನೆರಳು ಮನೆಗಳು, ಸೋಲಾರಿ ಮೀಟರ್, ಗಣಕಯಂತ್ರ ಕೊಠಡಿ, ಎಸ್‍ಡಿವಿ, ಟ್ರೈಕೋಡರ್ಮಾ, ಟ್ರೈಕೋಗ್ರಾಮಾ, ಸೊಡೋಮೊನಾಸ್‍ಗಳ ಸಮೂಹ ಉತ್ಪಾದನೆ, ಕೀಟ ಪಾಲನಾ ಸೌಲಭ್ಯ, ಎರೆಹುಳುಗೊಬ್ಬರ ಉತ್ಪಾದನಾ ಘಟಕಗಳು, ಬೈನಾಕುಲಾರ್ ಮತ್ತು ಫೇಸ್ ಕಾಂಟ್ರಾಸ್ಯ ಸೂಕ್ಷ್ಮದರ್ಶಕಗಳು ಲಭ್ಯವಿದೆ.
 |
ಡಾ. ಸಂಗಣ್ಣ ಎಮ್. ಸಜ್ಜನಾರ್ ಹಿರಿಯ ಕ್ಷೇತ್ರ ಅಧೀಕ್ಷಕರು ಮುಖ್ಯ ಸಂಶೋಧನಾ ಕೇಂದ್ರ, ರಾಯಚೂರು ಮೊ.ನಂ. 9480696320 ಮಿಂಚಂಚೆ: fsmars@uasraichur.edu.in |