ಅಭಿಪ್ರಾಯ / ಸಲಹೆಗಳು

ಸಂಶೋಧನಾ ನಿರ್ದೇಶನಾಲಯದ ಬಗ್ಗೆ

           

ಡಾ. ಬಿ. ಕೆ. ದೇಸಾಯಿ

ಸಂಶೋಧನಾ ನಿರ್ದೇಶಕರು

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ,

ರಾಯಚೂರು – 584 104

ಮೊ. ನಂ. 9480696304

ಫ್ಯಾಕ್ಸ್ ಸಂ: 08532-220181

ಮಿಂಚಂಚೆ: druasr@rediffmail.com

                dr@uasraichur.edu.in

 

 

ಸಂಶೋಧನಾ ಗುರಿ ಮತ್ತು  ಉದ್ದೇಶಗಳು: 

        ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಕಲ್ಯಾಣ-ಕರ್ನಾಟಕದ ರೈತ ಸಮುದಾಯಕ್ಕೆ ಉತ್ತಮ ಮಾರ್ಗದರ್ಶನ ಮತ್ತು ಕೃಷಿ ಸಂಬಂಧಪಟ್ಟ ಅವಶ್ಯಕತೆಗಳನ್ನು ಪೂರೈಸಲು 2009 ರಲ್ಲಿ ಸ್ಥಾಪನೆಯಾಯಿತು. ವಿಶ್ವವಿದ್ಯಾಲಯವು 1606’ ಉತ್ತರ ಮತ್ತು 7706’ ಪೂರ್ವ ಅಕ್ಷಾಂಶ ಮತ್ತು ರೇಖಾಂಶಗಳ ಮಧ್ಯೆ ಇದ್ದು ಸಮುದ್ರ ಮಟ್ಟಕ್ಕಿಂತ 398.9 ಮೀ. ಎತ್ತರದಲ್ಲಿದೆ. ಇದರ ವ್ಯಾಪ್ತಿಗೆ ಕರ್ನಾಟಕ ರಾಜ್ಯದ ಶೇ. 27 ರಷ್ಟು ಭೌಗೋಳಿಕ ಪ್ರದೇಶ, ಶೇ. 31 ರಷ್ಟು ಸಾಗುವಳಿ ಪ್ರದೇಶ ಮತ್ತು ಶೇ. 20 ರಷ್ಟು ನೀರಾವರಿ ಪ್ರದೇಶವನ್ನು ಒಳಗೊಂಡಿದ್ದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಸೀಮಿತವಾಗಿದೆ. ಈ ಪ್ರಾಂತ್ಯದಲ್ಲಿ ಕೃಷಿ ತೋಟಗಾರಿಕೆ, ಅರಣ್ಯ ಅನೇಕ ಸಸ್ಯ ಪ್ರಭೇದಗಳಿದ್ದು ವೈವಿಧ್ಯತೆಯಿಂದ ಕೂಡಿದೆ. ತುಂಗಭದ್ರ, ಕೃಷ್ಣ ಮತ್ತು ಕಾರಂಜಗಳತಹ ಪ್ರಮುಖವಾದ ನೀರಾವರಿ ಯೋಜನೆಗಳಿದ್ದು ಸುಮಾರು 12 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯನ್ನು ಒದಗಿಸುತ್ತಿವೆ.

          ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಮುಖ ಸಂಶೋಧನಾ ವಿಷಯಗಳೆಂದರೆ, ಮೂಲಭೂತ, ಆದ್ಯತೆಯ ಸಂಶೋಧನೆ ಮತ್ತು ಕೃಷಿ ಕೊರತೆಗಳ ಸುಧಾರಣೆಯ ಕಾರ್ಯಕ್ರಮಗಳಾಗಿವೆ. ಪ್ರಾರಂಭದಿಂದ ಪ್ರಸ್ತುತ ವರ್ಷಕ್ಕೆ 350 ಕ್ಕೂ ಹೆಚ್ಚಿನ ಸಂಶೋಧನಾ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳು ನೀಡಿವೆ. ಇದಲ್ಲದೆ ಕಳೆದ ಹತ್ತು ವರ್ಷದಿಂದ 56 ಯೋಜನೆಗಳು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೂ. 65.895 ಕೋಟಿ ಮಂಜೂರು ಮಾಡಿದ್ದು ಅನೇಕ ಕಾರ್ಯಗಳು ಸಂಪೂರ್ಣಗೊಂಡಿವೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಈಶಾನ್ಯ ಒಣ ವಲಯ, ಈಶಾನ್ಯ ಅರೆ ಮಲೆನಾಡು ವಲಯ ಮತ್ತು ಉತ್ತರ ಒಣ ವಲಯಗಳನ್ನು ಒಳಗೊಂಡಿದೆ. ಸಂಶೋಧನೆಗೆ 13 ಕೃಷಿ ಸಂಶೋಧನಾ ಕೇಂದ್ರಗಳು, 18 ಅಖಿಲ ಭಾರತ ಸುಸಂಘಟಿತ ಪ್ರಾಯೋಜನೆಗಳಿದ್ದು ಈ ಭಾಗದ ರೈತರ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಿವೆ. ಸಂಶೋಧನಾ ನಿರ್ದೇಶನಾಲಯವು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳ ಜೊತೆ ಒಡಂಬಡಿಕೆಗಳನ್ನು ಮಾಡಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಮಂಡಳಿ, ಮೆಹಿಕೊ ಕಂಪನಿ, ಮಹಾರಾಷ್ಟ್ರ, ಹೈದ್ರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ICRISAT, CIMMYT, CRIDA, IRRI, ICAR, IICPT ಮುಂತಾದವುಗಳಾಗಿವೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರಾರಂಭವಾದ ನಂತರ 28 ನೂತನ ತಳಿ/ಹೈಬ್ರಿಡ್‍ಗಳನ್ನು ಬಿಡುಗಡೆಗೊಳಿಸಿದ್ದು 293 ಕ್ಕೂ ಹೆಚ್ಚು ಬೆಳೆ ಉತ್ಪಾದನೆ, ಬೆಳೆ ಸಂರಕ್ಷಣೆ, ಕೃಷಿ ಯಾಂತ್ರೀಕರಣ, ಹೈನುಗಾರಿಕೆ ಮುಂತಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ತೊಗರಿ ನಾಟಿ ಪದ್ಧತಿ, ಇ-ಸ್ಯಾಪ್ ತಂತ್ರಜ್ಞಾನ, ಸಮಗ್ರ ಕೃಷಿ ಪದ್ಧತಿ, ಕೂರಿಗೆ ಭತ್ತದ ಬೇಸಾಯ, ಆಹಾರ ಮೌಲ್ಯವರ್ಧನೆ ತಂತ್ರಜ್ಞಾನಗಳು ರಾಷ್ಟ್ರೀಯಮಟ್ಟದಲ್ಲಿಯೂ ಸಹ ಪ್ರಖ್ಯಾತಿ ಪಡೆದಿವೆ. ಹೆಚ್ಚಿನ ಮಾಹಿತಿಗಾಗಿ...

 

 

 

ಇತ್ತೀಚಿನ ನವೀಕರಣ​ : 27-07-2020 04:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080