ಅಭಿಪ್ರಾಯ / ಸಲಹೆಗಳು

ಜೈವಿಕ ನಿಯಂತ್ರಣ ಘಟಕ

biocontrollab

 

        ಜೈವಿಕ ನಿಯಂತ್ರಣವು ಸಮಗ್ರ ಕೀಟ ನಿರ್ವಹಣೆಯ ಅವಿಭಾಜ್ಯ ಅಂಶಗಳಲ್ಲಿ ಒಂದಾಗಿದೆ. ಇದು ಎಲ್ಲಾ ರೀತಿಯ ಜೀವಿಗಳು ಮತ್ತು ಜೀವಿಗಳ ಉತ್ಪನ್ನಗಳನ್ನು ಒಳಗೊಂಡಿರುತ್ತದೆ. ಜೈವಿಕ ನಿಯಂತ್ರಣವು ನೈಸರ್ಗಿಕ ಶತ್ರುಗಳನ್ನು (ಪರಭಕ್ಷಕ ಮತ್ತು ಪರತಂತ್ರ ಜೀವಿಗಳು), ಕೀಟಗಳಲ್ಲಿ ರೋಗವನ್ನು ಉತ್ಪತ್ತಿ ಮಾಡುವ ಸೂಕ್ಷ್ಮಾಣು ಜೀವಿಗಳಾದ ದುಂಡಾಣುಗಳು, ಶಿಲೀಂದ್ರಗಳು, ನಂಜಾಣು ಮತ್ತು ನೆಮೆಟೋಡ್‍ಗಳಿಂದ ತಯಾರಾದ ಉತ್ಪನ್ನಗಳನ್ನು ಬಳಸಿಕೊಂಡು ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಬಹುದಾಗಿದೆ.

       ಜೈವಿಕ ಕೀಟನಾಶಗಳ ಭರವಸೆಯ ಪರಿಣಾಮಗಳ ಹೊರತಾಗಿಯೂ, ಭಾರತೀಯ ಜೈವಿಕ ಕೀಟನಾಶಕ ಉದ್ಯಮವು ಬಹಳ ನಿಧಾನಗತಿಯಲ್ಲಿ ಬೆಳೆಯುತ್ತಿದೆ. ಜೈವಿಕ ಕೀಟನಾಶಕಗಳು ಒಟ್ಟು ಜಾಗತೀಕ ಕೀಟನಾಶಕ ಮಾರುಕಟ್ಟೆಯ 2000 ಇಸ್ವಿಯಲ್ಲಿ ಸುಮಾರು 0.2% ಪ್ರತಿಶತ ರಷ್ಟಿದೆ ಮತ್ತು ಇದು 2010 ವೇಳೆಗೆ 4.5% ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಭಾರತದಲ್ಲಿ ಜೈವಿಕ ಕೀಟನಾಶಗಳ ಉತ್ಪಾದನೆಯು ಟ್ರೈಕೋಡರ್ಮಾ ಮತ್ತು ಸೂಡೋಮೋನಾಸ್ ಫ್ಲೋರೊಸೆನ್ಸ್‍ಗಳಂತಹ ಸೂಕ್ಷ್ಮ ಜೀವಿಗಳ ಪ್ರಾಬಲ್ಯ ಹೆಚ್ಚಾಗಿರುತ್ತದೆ. ಆದರೆ ಕೀಟಗಳ ನಿರ್ವಹಣೆಯಲ್ಲಿ ಉಪಯೋಗಿಸುವ ಇತರೆ ಜೈವಿಕ ಪರಿಕರಗಳಾದ ಎನ್‍ಪಿವಿ, ಗ್ರ್ಯಾನುಲೋವೈರಸ್, ದುಂಡಾಣುಗಳು ಮತ್ತು ಶೀಲಿಂದ್ರಗಳನ್ನು ಉತ್ಪಾದನೆಯನ್ನು ಸಹ ಸ್ಥಾಪಿಸಿ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ...

 ಗುರಿ ಮತ್ತು ಉದ್ದೇಶಗಳು

ಜೈವಿಕ ನಿಯಂತ್ರಣ ವಿಬಾಗದ ಮುಖ್ಯ ಗುರಿಯು ಸ್ಥಳಿಯ ಜೈವಿಕ ನಿಯಂತ್ರಣ ಪರಿಕರಗಳನ್ನು ಗುರುತಿಸಿವುದು ಮತ್ತು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುವುದು.

 1. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಗಾಧವಾಗಿ ಕಂಡು ಬರುವ ವಿವಿಧ ಜೈವಿಕ ಶತ್ರುಗಳನ್ನು ಗುರುತಿಸುವುದು ಮತ್ತು ಸಂಗ್ರಹಿಸುವುದು
 2. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಂಡು ಬರುವ ವಿಶಿಷ್ಟ ಮತ್ತು ಬಲಿಷ್ಠ ಜೈವಿಕ ಶತ್ರುಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವುದು
 3. ಕಲ್ಯಾಣ ಕರ್ನಾಟಕದ ರೈತರರಿಗೆ ಅತ್ಯಂತ ನಿಖರವಾದ ಮತ್ತು ಗುಣಮಟ್ಟದ ಜೈವಿಕ ಪರಿಕರಗಳನ್ನು ಪೂರೈಸುವುದು
 4. ಕಲ್ಯಾಣ ಕರ್ನಾಟಕದ ರೈತ ಯುವ ಸಮೂಹಕ್ಕೆ ಜೈವಿಕ ಪರಿಕರಗಳ ಉತ್ಪಾದನ ತಾಂತ್ರಿಕ ತರಬೇತಿ ನಿಡುವುದು

ಹೆಚ್ಚಿನ ಮಾಹಿತಿಗಾಗಿ

arunkumarhosamani

        ಡಾ.ಅರುಣಕುಮಾರ ಹೊಸಮನಿ

         ಪ್ರಾದ್ಯಾಪಕರು ಮತ್ತು ಮುಖ್ಯಸ್ಥರು

         ಜೈವಿಕ ನಿಯಂತ್ರಣ ವಿಭಾಗ, ಮು.ಕೃ.ಸಂ.ಕೇ.

         ಕೃವಿವಿ ರಾಯಚೂರು

         ದೂರವಾಣಿ ಸಂಖ್ಯೆ: 08532-220211

         ಮೊಬೈಲ್ ಸಂಖ್ಯೆ: 9449762175

ಇತ್ತೀಚಿನ ನವೀಕರಣ​ : 22-07-2020 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080