ಅಭಿಪ್ರಾಯ / ಸಲಹೆಗಳು

ಕೃಷಿ ಸಂಶೋಧನಾ ಕೇಂದ್ರ ಸಿರುಗುಪ್ಪ

 

 

            1950 ರ ಪೂರ್ವದಲ್ಲಿ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳೆರಡೂ ಒಂದಿಲ್ಲೊಂದು ವರ್ಷಕ್ಕೆ ಬರವಿಕೋಪಕ್ಕೆ ತುತ್ತಾಗುತ್ತಲೇ ಬಂದಿದ್ದವು. ಈ ವಿಕೋಪವನ್ನು ಶಾಶ್ವತವಾಗಿ ತೊಡೆದು ಹಾಕುವ ನಿಟ್ಟಿನಲ್ಲಿ ಹಾಗೂ ಇಲ್ಲಿ ಹರಿಯುವ ತುಂಗಭದ್ರಾ ನದಿಯ ನೀರನ್ನು ಕೃಷಿಗೆ ಬಳಸುವ ಮೂಲ ಉದ್ದೇಶದಿಂದ ನದಿಯ ನೀರು ಮತ್ತು ಈ ಪ್ರದೇಶದ ಮಣ್ಣು ಪರಿಶೀಲಿಸುವ ಕಾರ್ಯವನ್ನು ಮಣ್ಣು ಮಾಪನ ಸಮಿತಿಯು ಮಾಡಿತ್ತು. ಸದರಿ ಸಮಿತಿಯ ಅಧ್ಯಯನದ ಪ್ರಕಾರ ನದಿಯ ನೀರು ಮತ್ತು ಈ ಪ್ರದೇಶದ ಮಣ್ಣು ನೀರಾವರಿಗೆ ಯೋಗ್ಯವಾಗಿದೆಯೆಂದು ತಿಳಿಸಿತ್ತು . ತತ್ಪರಿಣಾಮವಾಗಿ ನೀರಾವರಿ ಅಭಿವೃದ್ಧಿ ಮಂಡಳಿಯು ಸದರಿ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಹಾಗೂ ನೀರಾವರಿಯಿಂದಾಗಿ ಭೂಮಿಯು ಕ್ಷಾರ, ಜವಳು ಮತ್ತು ಸವಳು ಉಂಟಾಗುವುದನ್ನು ಅಧ್ಯಯನ ನಡೆಸುವ ಮೂಲ ಉದ್ದೇಶದಿಂದ ಕೃಷಿ ಸಂಶೋಧನಾ ಕೇಂದ್ರವನ್ನು ಸಿರುಗುಪ್ಪದಲ್ಲಿ ಸ್ಥಾಪಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದರ  ಪರಿಣಾಮವಾಗಿ ಈ ಕೇಂದ್ರವು 1937 ರಲ್ಲಿ ಉಗಮ ಗೊಂಡಿತು.

ಈ ಕೇಂದ್ರವು ಉತ್ತರ ಒಣವಲಯ (ಪ್ರದೇಶ-2, ವಲಯ-3) ವ್ಯಾಪ್ತಿಗೆ ಬರುತ್ತಿದ್ದು ಉತ್ತರ ಕರ್ನಾಟಕಕ್ಕೆ ಒಳಪಟ್ಟಿದೆ. ಇದು ಸಿರುಗುಪ್ಪದಿಂದ 1.5 ಕಿ.ಮೀ ಅಂತರದಲ್ಲಿ ಆದೋನಿ ರಸ್ತೆಯಲ್ಲಿದೆ. ಇಲ್ಲಿ ವರ್ಷಕ್ಕೆ 550 ರಿಂದ 600 ಮಿ.ಮಿ. ಮಳೆಯಾಗುತ್ತಿದ್ದು, ಹೆಚ್ಚಿನ ಮಳೆಯು ಜುಲೈ ನಿಂದ ಅಕ್ಟೋಬರ್ ತಿಂಗಳಲ್ಲಿ ಕೇಂದ್ರಿಕೃತಗೊಂಡಿದೆ. ಇಲ್ಲಿಯ ಭೂಮಿಯು ಕಪ್ಪು ಮಣ್ಣು ಹೊಂದಿದ್ದು ನೀರಾವರಿಗೆ ಯೋಗ್ಯವಾಗಿದೆ.  ಹೆಚ್ಚಿನ ಮಾಹಿತಿಗಾಗಿ...

   Basavanneppa M.A
The Chief Agronomist and Campus Head
Siruguppa -583121
Phone:9480696333
Fax:08396-220249
E-mail:ars.sgp583121@gmail.com

 

ಇತ್ತೀಚಿನ ನವೀಕರಣ​ : 23-07-2020 03:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080