ಅಭಿಪ್ರಾಯ / ಸಲಹೆಗಳು

ಕೃಷಿ ಸಂಶೋಧನಾ ಕೇಂದ್ರ ಕವಡಿಮಟ್ಟಿ

 

ಕೃಷಿ ಸಂಶೋಧನಾ ಕೇಂದ್ರ ಕವಡಿಮಟ್ಟಿ

            ಕೃಷಿ ಸಂಶೋಧನಾ ಕೇಂದ್ರ ಕವಡಿಮಟ್ಟಿಯು 1986 ರಲ್ಲಿ ಸ್ಥಾಪಿತವಾಗಿದ್ದು, ಈಶಾನ್ಯ ಒಣ ವಲಯ (ಪ್ರದೇಶ I, ವಲಯ II ), 16.520  ಉತ್ತರ ಅಕ್ಷಾಂಶ ಮತ್ತು 76.760 ಪೂರ್ವ ರೇಖಾಂಶ ಹಾಗೂ 693 ಮೀ. ಸಮುದೃ ಮಟ್ಟದ ಮೇಲೆ ಇರುತ್ತದೆ. ಈ ಸಂಶೋಧನಾ ಕೇಂದ್ರದ ವಾರ್ಷಿಕ ಸರಾಸರಿ ಮಳೆಯು 693 ಮಿ.ಮೀ. ಇರುತ್ತದೆ. ಈ ಸಂಶೋಧನಾ ಕೇಂದ್ರವು ಸುರಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿ ಶ್ರೀರಂಗಪಟ್ಟಣ-ಬೀದರ್ ರಾಜ್ಯ ಹೆದ್ದಾರಿಯಲ್ಲಿರುತ್ತದೆ. ಈ ಸಂಶೋಧನಾ ಕೇಂದ್ರವು ಸುಮಾರು 58 ಹೇಕ್ಟೆರ್ ಪ್ರದೇಶ ಭೂಮಿ ಹೊಂದಿದ್ದು, ಶೇ 80 ರಷ್ಟು ಕೃಷ್ಣ ಮೇಲ್ದಂಡೆ ನೀರಾವರಿ ಕಾಲುವೆಗೆ ಒಳಪಟ್ಟಿರುತ್ತದೆ. ತೋಟಗಾರಿಕಾ ಹಣ್ಣಿನ ಬೆಳೆಗಳೇ ಈ ಸಂಶೋಧನಾ ಕೇಂದ್ರದ ವಿಶಿಷ್ಟತೆ ಹಾಗೂ ಇಲ್ಲಿ ಮಾವು, ಸಪೋಟ, ನಿಂಬೆ, ಬಾರೆ, ತೆಂಗು, ಸೀತಾಫಲ ಹಾಗೂ ನೇರಳೆ ಬೆಳೆಗಳನ್ನು ಸುಮಾರು 18 ಹೇಕ್ಟೆರ್ ಪ್ರದೇಶzಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಗಳ ಸಸಿಗಳನ್ನು ಇಲ್ಲಿ ತಯಾರಿಸಲಾಗುತ್ತಿದ್ದು ಈ ಭಾಗದ ರೈತರಿಗೆ ಲಭ್ಯವಾಗುತ್ತಿದೆ. ಬೀಜ ಉತ್ಪಾದನೆ ಈ ಕೇಂದ್ರದ ಇನ್ನೊಂದು ಮೂಲ ಉದ್ದೇಶ ಹಾಗೂ ಭತ್ತ, ತೊಗರಿ ಮತ್ತು ಶೇಂಗಾ ಬೆಳೆಗಳ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಬೆಳೆದು ರೈತರಿಗೆ ಪೂರೈಸಲಾಗುತ್ತಿದೆ. ಇಲ್ಲಿ ವಿವಿಧ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಇಲ್ಲಿ ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಯನ್ನು 1 ಹೆ. ಪ್ರದೇಶದಲ್ಲಿ ಮಾಡಲಾಗಿದೆ. ಇದಲ್ಲದೆ ಎರೆಹುಳುಗೊಬ್ಬರ ಉತ್ಪಾದನೆ, ಆಡು ಸಾಕಾಣಿಕೆ ಮತ್ತು ನೈಸರ್ಗಿಕ ಆಕಳು ಸಾಕಾಣಿಕೆ ಪ್ರಾತ್ಯಕ್ಷಿಕೆಗಳಿರುತ್ತವೆ.

 

   

ಮೋಹನ್ ಚವಾಣ್ 

ಮುಖ್ಯಸ್ಥರು

Mobile: 9480696329, 7795684656

Phone:08443-292384
Fax:08443-292384
E-mail:arscampushead@yahoo.in 

 

ಮೋ: 9480696329, 7795684656

ಇತ್ತೀಚಿನ ನವೀಕರಣ​ : 23-07-2020 03:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080