ಅಭಿಪ್ರಾಯ / ಸಲಹೆಗಳು

ಕೃಷಿ ಸಂಶೋಧನಾ ಕೇಂದ್ರ ಚಿತ್ತಾಪುರ

 

           ಕೃಷಿ ಸಂಶೋಧನಾ ಕೇಂದ್ರ, ಚಿತ್ತಾಪುರ ಕರ್ನಾಟಕದ ಈಶಾನ್ಯ ಒಣ ವಲಯದಲ್ಲಿದೆ (ಪ್ರದೇಶ II, ವಲಯ 2) ಅಕ್ಷಾಂಶ 17.12° N ಮತ್ತು ರೇಖಾಂಶ 77.08° E ನಲ್ಲಿದೆ. ಇದು ಸರಾಸರಿ ಸಮುದ್ರ ಮಟ್ಟಕ್ಕಿಂತ 403 ಮೀಟರ್ (1322 ಅಡಿ) ಎತ್ತರದಲ್ಲಿದೆ, ಇದು ಶುಷ್ಕ ಹವಾಮಾನದಿಂದ ನಿರೂಪಿಸಲ್ಪಟ್ಟಿದೆ, ವಾರ್ಷಿಕ ಮಳೆ 633.2 ರಿಂದ 806.6 ಮಿಮೀ ವರೆಗೆ ಬದಲಾಗುತ್ತದೆ. ಕೃಷಿ ಸಂಶೋಧನಾ ಕೇಂದ್ರವು, ಚಿತ್ತಾಪುರ ಪಟ್ಟಣದಿಂದ ಸುಮಾರು 1.8 ಕಿ.ಮೀ ದೂರದಲ್ಲಿದೆ ಮತ್ತು ಇದು ಹೈದರಾಬಾದ್‌ನಿಂದ ಮುಂಬೈಗೆ ಹೋಗುವ ಮುಖ್ಯ ರೈಲ್ವೆ ಹಳಿಯು ಕೇಂದ್ರದ ಹತ್ತಿರದಿಂದ ಹಾದುಹೋಗುತ್ತದೆ, ಕೃಷಿ ಸಂಶೋಧನಾ ಕೇಂದ್ರ, ಚಿತ್ತಾಪುರ ಕೃಷಿಕ್ಷೇತ್ರವನ್ನು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು 1962 ರಲ್ಲಿ ಬೀಜ ತೋಟವಾಗಿ ಸ್ಥಾಪಿಸಿತು, ಇದರ ಮುಖ್ಯ ಉದ್ದೇಶ ವಿವಿಧ ಕ್ಷೇತ್ರ ಬೆಳೆಗಳಲ್ಲಿ ಬೀಜ ಉತ್ಪಾದನೆ ಮಾಡುವುದು.

          ಈ ಕೇಂದ್ರವು ಆಳವಾದ ಕಪ್ಪು ಮತ್ತು ಮಧ್ಯಮ ಕಪ್ಪು ಮಣ್ಣನ್ನು ಹೊಂದಿದ್ದು, ಒಟ್ಟು 56.32 ಎಕರೆ ಪ್ರದೇಶದ ಭೂಮಿಯನ್ನು ಹೊಂದಿದೆ,  ಇದರಲ್ಲಿ 53.20 ಎಕರೆ ಭೂಮಿ ಕೃಷಿ ಮಾಡುತ್ತಿರುವ ಪ್ರದೇಶವಾಗಿದೆ. ಉಳಿದ ಪ್ರದೇಶವು ರಸ್ತೆಗಳು ಮತ್ತು ಕಟ್ಟಡಗಳ ಅಡಿಯಲ್ಲಿದೆ (3.12 ಎಕರೆ). ಸಂಶೋಧನೆ, ಬೀಜ ಉತ್ಪಾದನೆ ಮತ್ತು ತರಬೇತಿಯ ಉದ್ದೇಶದಿಂದ 2012 ರಲ್ಲಿ ಬೀಜ ತೋಟವನ್ನು ಗುತ್ತಿಗೆ ಆಧಾರದ ಮೇಲೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿಗೆ ಹಸ್ತಾಂತರಿಸಲಾಯಿತು,

          ಈ ಕೇಂದ್ರದ ಮುಖ್ಯ ಉದ್ದೇಶ, ಈ ಪ್ರದೇಶದಲ್ಲಿ ಬೆಳೆಯುವ ಪ್ರಮುಖ ಬೆಳೆಗಳ ಬೀಜಗಳನ್ನು ಮಳೆಯಾಶ್ರಿತ ಸ್ಥಿತಿಯಲ್ಲಿ ಉತ್ಪಾದಿಸುವುದು ಹಾಗೂ ಕೃಷಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಕೃಷಿ ಯಾಂತ್ರೀಕರಣದಿಂದ ಮಾಡುವುದು. ಇಲ್ಲಿಯವರೆಗೆ ಕೃಷಿ ಸಂಶೋಧನಾ ಕೇಂದ್ರ ಚಿತ್ತಾಪುರದಲ್ಲಿ ವಿವಿಧ ವರ್ಗಗಳ 785 ಕ್ವಿಂಟಲ್ ಬೀಜಗಳನ್ನು (ಪ್ರಮುಖ ಬೆಳೆಗಳು: ತೊಗರಿ, ಹೆಸರು, ಉದ್ದು ಮತ್ತು ಕಡಲೆ) ಉತ್ಪಾದಿಸಲಾಗಿದೆ.

ಈ ಕೇಂದ್ರದ ಮುಖ್ಯಸ್ಥರು ಹಾಗೂ ಕ್ಷೇತ್ರದ ಆಧೀಕ್ಷಕರು ಉಸ್ತುವಾರಿ ಆಗಿದ್ದು, ಒಬ್ಬ ಕ್ಷೇತ್ರ ಸಹಾಯಕ ಮತ್ತು ಒಬ್ಬ ಕೃಷಿ ಕಾರ್ಮಿಕ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೃಷಿ ಸಂಶೋಧನಾ ಕೇಂದ್ರ, ಚಿತ್ತಾಪುರದಲ್ಲಿ ಕಚೇರಿ ಕೊಠಡಿ, ಎರಡು ಗೋದಾಮುಗಳು ಮತ್ತು ರಾಶಿಯ ಕಣವಿದೆ. ಕೃಷಿ ಸಂಶೋಧನಾ ಕೇಂದ್ರ, ಚಿತ್ತಾಪುರ ಜಮೀನನ್ನು ನೀರಾವರಿ ಅಡಿಯಲ್ಲಿ ತರುವ ಪ್ರಯತ್ನ ಪ್ರಗತಿಯಲ್ಲಿದೆ.

 

ಡಾ. ಪ್ರವೀಣ್ ಕುಮಾರ್ ಬಾರೂರ್ಕರ್ 

ಮುಖ್ಯಸ್ಥರು ಮತ್ತು ಕ್ಷೇತ್ರ ಅಧೀಕ್ಷಕರು (ಉಸ್ತುವಾರಿ) 

ಕೃಷಿ ಸಂಶೋಧನಾ ಕೇಂದ್ರ, ಚಿತ್ತಾಪೂರು – 585 211

ಮೋ.ನಂ. 8310251261

E-mail: fsarschittapur@gmail.com

 

ಇತ್ತೀಚಿನ ನವೀಕರಣ​ : 23-07-2020 04:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080